ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಾಜಿ ಸಂಸದ ರಾಹುಲ್ ಗಾಂಧಿ ವಿಚಾರಣೆಯಿಂದ ಮೂರು ದಿನಗಳ ವಿನಾಯಿತಿ ಕೇಳಿದ್ದಾರೆ. ನಿನ್ನೆ ಈ ಸಂಬಂಧ ಇಡಿ ಅಧಿಕಾರಿಗಳಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿಗೆ ಕೊರೊನಾ ಸೋಂಕು ತಗುಲಿದ್ದು ಆಸ್ಪತ್ರೆ ದಾಖಲಾಗಿದ್ದಾರೆ ಮತ್ತು ಇದೇ ಭಾನುವಾರ ಹುಟ್ಟುಹಬ್ಬ ಇರುವ ಹಿನ್ನಲೆ ಭಾನುವಾರದವರೆಗೂ ವಿಚಾರಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಸೋಮವಾರದಿಂದ ಬುಧವಾರದವರೆಗೂ ವಿಚಾರಣೆಗೆ ಹಾಜರಾಗಿದ್ದ ರಾಹುಲ್ ಗಾಂಧಿ ಸುಮಾರು 16 ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಗುರುವಾರ ಬಿಡುವು ನೀಡಿದ್ದ ಇಡಿ ಶುಕ್ರವಾರ ವಿಚಾರಣೆ ಹಾಜರಾಗಲು ಸಮನ್ಸ್ ನೀಡಿದ್ದರು. ಆದರೆ ಈ ನಡುವೆ ಈ ಪತ್ರ ಬರೆದು ವಿನಾಯಿತಿ ಕೋರಿದ್ದಾರೆ. ಇದೀಗ ಇಡಿ ಆಧಿಕಾರಿಗಳು ರಾಹುಲ್ ಗಾಂಧಿಗೆ ಅನುಮತಿಯನ್ನು ನೀಡಿದ್ದಾರೆ. ಸೋಮವಾರದವರೆಗೂ ರಾಹುಲ್ ಗಾಂಧಿ ವಿಚಾರಣೆ ಹಾಜರಾಗುವುದಿಲ್ಲ ಎಂದು ತಿಳಿಸಿವೆ. ರಾಹುಲ್ ಗಾಂಧಿ ವಿಚಾರಣೆಯಿಂದ ಬ್ರೇಕ್ ತೆಗೆದುಕೊಂಡ ಹಿನ್ನಲೆ ಎಲ್ಲ ಕಾಂಗ್ರೆಸ್ ನಾಯಕರಿಗೂ ಕ್ಷೇತ್ರಕ್ಕೆ ತೆರಳಿ ಸೋಮವಾರ ದೆಹಲಿಗೆ ಮರುಳುವಂತೆ ಸೂಚಿಸಿದ್ದಾರೆ. ಇನ್ನು, ಮುಂದಿನ ಶುಕ್ರವಾರ ಅಂದರೆ ಜೂನ್ 24ಕ್ಕೆ ಸೋನಿಯಾಗಾಂಧಿ ಕೂಡ ವಿಚಾರಣೆಗೆ ಹಾಜರಾಗೋ ಸಾಧ್ಯತೆಗಳಿವೆ.
#publictv #newscafe #hrranganath